ಸದ್ಯಕ್ಕೆ ರೈಲ್ವೇ ಸಂಚಾರ ಬೇಡ ಎಂದ ನಾಲ್ವರು ಮುಖ್ಯಮಂತ್ರಿಗಳು.!!
ರಾಷ್ಟ್ರೀಯ

ಸದ್ಯಕ್ಕೆ ರೈಲ್ವೇ ಸಂಚಾರ ಬೇಡ ಎಂದ ನಾಲ್ವರು ಮುಖ್ಯಮಂತ್ರಿಗಳು.!!

ಲಾಕ್ ಡೌನ್ ಸಡಿಲಿಕೆ ವಿಚಾರವಾಗಿ ಮೋದಿ ನಡೆಸಿದ ವೀಡಿಯೋ ಕಾನ್ಫೆರೆನ್ಸ್ ನಲ್ಲಿ ತಮಿಳುನಾಡು ಸಿಎಂ ಪಳನಿಸ್ವಾಮಿ ರೈಲ್ವೇ ಸಂಚಾರವನ್ನು ರದ್ದುಗೊಳಿಸಬೇಕು ಎಂದು ಕೇಳಿಕೊಂಡರು. ಪಳನಿಸ್ವಾಮಿ ಮಾತಿಗೆ ಬೆಂಬಲದಂತೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಕೂಡ ನಿಂತರು. ಇದೇ ವೇಳೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ಛತ್ತಿಸ್ಗಢ್ ಸಿಎಂ ಭೂಪೇಶ್ ಭಘೆಲ್ ಕೂಡ ಸಮ್ಮತಿ ಸೂಚಿಸಿದರು.

ಪ್ರತಿಧ್ವನಿ ವರದಿ

ನಾಳೆಯಿಂದ (12 ಮೇ) ರೈಲ್ವೇ ಸಂಚಾರ ಮತ್ತೆ ಆರಂಭಗೊಳ್ಳುತ್ತಿದೆ. ಈಗಾಗಲೇ ಆನ್‌ಲೈನ್‌ ಬುಕ್ಕಿಂಗ್‌ ಕೂಡ ಚಾಲ್ತಿಯಲ್ಲಿದೆ. ಹಲವು ಮುನ್ನಚ್ಚೆರಿಕಾ ಕ್ರಮಗಳನ್ನು ಕೂಡ ರೈಲ್ವೇ ಇಲಾಖೆ ಕೈಗೊಂಡಿದೆ. ಇದೇ ಸಮಯದಲ್ಲಿ ರೈಲ್ವೇ ಸಂಚಾರವನ್ನು ತಡೆ ಹಿಡಿಯಬೇಕು ಎಂದು ದೇಶದ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ.

ಲಾಕ್‌ ಡೌನ್‌ ಸಡಿಲಿಕೆ ವಿಚಾರವಾಗಿ ಮೋದಿ ನಡೆಸಿದ ವೀಡಿಯೋ ಕಾನ್ಫೆರೆನ್ಸ್‌ ನಲ್ಲಿ ತಮಿಳುನಾಡು ಸಿಎಂ ಪಳನಿಸ್ವಾಮಿ ರೈಲ್ವೇ ಸಂಚಾರವನ್ನು ರದ್ದುಗೊಳಿಸಬೇಕು ಎಂದು ಕೇಳಿಕೊಂಡರು. ಪಳನಿಸ್ವಾಮಿ ಮಾತಿಗೆ ಬೆಂಬಲದಂತೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ್‌ ರಾವ್‌ ಕೂಡ ನಿಂತರು. ಇದೇ ವೇಳೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಹಾಗೂ ಛತ್ತಿಸ್ಗಢ್‌ ಸಿಎಂ ಭೂಪೇಶ್‌ ಭಘೆಲ್‌ ಕೂಡ ಸಮ್ಮತಿ ಸೂಚಿಸಿದರು.

ಈ ಬಗ್ಗೆ ಸ್ಪಷ್ಟನೆ ನೀಡಿದ ತೆಲಂಗಾಣ ಸಿಎಂ ಕೆಸಿಆರ್‌, ಈಗಲೇ ರೈಲ್ವೇ ಸಂಚಾರಕ್ಕೆ ಅನುಮತಿ ಕೊಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕರೋನಾ ಹರಡುವ ಸಾಧ್ಯತ ಇದೆ. ಈಗಾಗಲೇ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಅಲ್ಲದೆ ಯಾವ ರಾಜ್ಯವೂ ಆರ್ಥಿಕವಾಗಿ ಸದೃಢವಾಗಿಲ್ಲ. ಕೇಂದ್ರ ಕೂಡ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಮೊದಲ ಸಂಪರ್ಕ ಪತ್ತೆಹಚ್ಚೋದೇ ಕಷ್ಟದ ಕೆಲಸವಾಗಿದೆ. ಒಂದು ವೇಳೆ ರೈಲ್ವೇ ಸಂಚಾರ ಆರಂಭಗೊಂಡು ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾದರೆ..? ಎಂಬ ಪ್ರಶ್ನೆಯನ್ನು ಪ್ರಧಾನಿ ಮೋದಿಯ ಮುಂದಿಟ್ಟಿದ್ದಾರೆ. ಈ ಮೂಲಕ ನಾಳೆ ಆರಂಭಗೊಳ್ಳಲಿರುವ ರೈಲು ಸಂಚಾರಕ್ಕೆ ಈ ನಾಲ್ಕು ಜನ ಮುಖ್ಯಮಂತ್ರಿಗಳು ಆಕ್ಷೇಪ ಎತ್ತಿದ್ದಾರೆ.

Click here Support Free Press and Independent Journalism

Pratidhvani
www.pratidhvani.com