ನಾಡಿದ್ದಿನಿಂದ ದೇಶದಲ್ಲಿ ರೈಲು ಸಂಚಾರ ಪುನರಾರಂಭ
ರಾಷ್ಟ್ರೀಯ

ನಾಡಿದ್ದಿನಿಂದ ದೇಶದಲ್ಲಿ ರೈಲು ಸಂಚಾರ ಪುನರಾರಂಭ

ರೈಲುಗಳಲ್ಲಿ ಪ್ರಯಾಣಿಸಲು ಮೇ 11ರ ಸಂಜೆ ನಾಲ್ಕು ಗಂಟೆಯಿಂದ IRCTC ವೆಬ್ಸೈಟ್‌ನಲ್ಲಿ ಪ್ರಯಾಣಿಕರು ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.

ಪ್ರತಿಧ್ವನಿ ವರದಿ

ಮೇ 12ರ ನಂತರ ಹಂತ ಹಂತವಾಗಿ ಭಾರತದಲ್ಲಿ ರೈಲ್ವೇ ಸೇವೆಯನ್ನು ಪ್ರಾರಂಭಿಸುವ ಸೂಚನೆಯನ್ನು ಭಾರತೀಯ ರೈಲ್ವೇ ಇಲಾಖೆ ನೀಡಿದೆ. ಮೊದಲ ಹಂತದಲ್ಲಿ ಪ್ರತೀ ದಿನ 15 ರೈಲುಗಳ ಸೇವೆಯನ್ನು ಆರಂಭಿಸುವ ಕುರಿತು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಮೂರನೇ ಹಂತದ ಲಾಕ್‌ಡೌನ್‌ ಇನ್ನೇನು ಕೊನೆಗೊಳ್ಳಲಿದೆ ಎನ್ನುವ ಸಮಯದಲ್ಲಿ ಈ ಪ್ರಕಟಣೆಯನ್ನು ರೈಲ್ವೇ ಇಲಾಖೆ ಇಲಾಖೆ ಹೊರಡಿಸಿದೆ.

ಈ ವಿಶೇಷ ರೈಲುಗಳು, ನವ ದೆಹಲಿಯಿಂದ ಹೊರಟು, ಧಿಬ್ರುಗಢ್‌, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್‌ಪುರ್‌, ರಾಂಚಿ, ಭುಬನೇಶ್ವರ್‌, ಸೆಕುಂದರಾಬಾದ್‌, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್‌ಗಾಂವ್‌, ಮುಂಬೈ ಸೆಂಟ್ರಲ್‌, ಅಹಮದಾಬಾದ್‌ ಮತ್ತು ಜಮ್ಮು ತಾವಿ ರೈಲ್ವೇ ಸ್ಟೇಷನ್‌ಗಳಿಗೆ ಹೊರಡಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

15 ರೈಲುಗಳು ತಮ್ಮ ಮೂಲ ಸ್ಥಾನದಿಂದ ನಿರ್ದೇಶಿತ ರಾಜ್ಯಗಳಿಗೆ ತಲುಪಿ ನಂತರ ವಾಪಾಸ್‌ ದೆಹಲಿಗೆ ಬರಲಿವೆ. ಹೀಗಾಗಿ, ಒಟ್ಟು 30 ಬಾರಿ ರೈಲ್ವೇ ಪ್ರಯಾಣ ನಡೆಯಲಿದೆ ಎಂದು ತಿಳಿಸಲಾಗಿದೆ.

ಈ ರೈಲುಗಳಲ್ಲಿ ಪ್ರಯಾಣಿಸಲು ಮೇ 11ರ ಸಂಜೆ ನಾಲ್ಕು ಗಂಟೆಯಿಂದ IRCTC ವೆಬ್‌ಸೈಟ್‌ನಲ್ಲಿ ಪ್ರಯಾಣಿಕರು ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಆದರೆ, ಯಾವುದೇ ರೈಲು ನಿಲ್ದಾಣಗಳಲ್ಲಿ ಟಿಕೆಟ್‌ ವಿತರಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

Click here Support Free Press and Independent Journalism

Pratidhvani
www.pratidhvani.com