ಜಗತ್ತಿನ ವಿರಳ ಸೃಷ್ಟಿ ಬಿಳಿ ಜಿರಾಫೆಗಳು ಇನ್ನು ನೆನಪಿಗಷ್ಟೇ 
ರಾಷ್ಟ್ರೀಯ

ಜಗತ್ತಿನ ವಿರಳ ಸೃಷ್ಟಿ ಬಿಳಿ ಜಿರಾಫೆಗಳು ಇನ್ನು ನೆನಪಿಗಷ್ಟೇ 

ಪ್ರಕೃತಿಯ ವಿಚಿತ್ರ ಸೃಷ್ಟಿಯ ಧ್ಯೋತಕವಾಗಿದ್ದ  ಅಮಾಯಕ ಪ್ರಾಣಿಗಳನ್ನ ಬೇಟೆಯಾಡಿದ್ದಾರೆ. ಅದರ ಅಸ್ತಿಪಂಜರಗಳೂ ಸಿಕ್ಕಿವೆ ಎಂದು ಅಲ್ಲಿನ ಅಧಿಕಾರಿಗಳು ಹೇಳುವ ಮೂಲಕ ಆಘಾತ ಉಂಟು ಮಾಡಿದ್ದಾರೆ. ಶ್ವೇತ ವರ್ಣದ ಜಿರಾಫೆಗಳು ಎಂದರೆ ಯಾವುದೋ ವಿಶಿಷ್ಟ ಪ್ರಬೇಧವೇನೂ ಅಲ್ಲ, ಆದರೆ ಅದೊಂದು ವಿರಳ ಸೃಷ್ಟಿ. ಗರ್ಭಾವಸ್ಥೆಯಲ್ಲಿ ಚರ್ಮಕೋಶದ ವರ್ಣದ್ರವ್ಯಗಳ ಉತ್ಪತ್ತಿ ವಿಫಲವಾದಾಗ ಈ ತರಹದ ಪ್ರಾಣಿಗಳು ಸೃಷ್ಟಿಯಾಗುತ್ತವೆ.

ಉದಯ ಸಾಗರ

ಕಳೆದ ವರ್ಷ ಬಿಬಿಸಿ, ಡಿಸ್ಕವರಿ, ನ್ಯಾಷನಲ್‌ ಜಿಯಾಗ್ರಫಿ ಚಾನೆಲ್‌ಗಳೆಲ್ಲಾ ಕೀನ್ಯಾ ದೇಶದ ಶ್ವೇತ ವರ್ಣದ ಜಿರಾಫೆಗಳನ್ನ ಜಗತ್ತಿಗೆ ತೋರಿಸಿ ಸೃಷ್ಟಿಯ ಅಚ್ಚರಿಯ ಬಗ್ಗೆ ವೈಜ್ಞಾನಿಕ ವರದಿ ನೀಡಿದ್ದವು. ಒಂದು ವರ್ಷದ ಅವಧಿಯಲ್ಲಿ ಈ ಜಿರಾಫೆಗಳು ಕೀನ್ಯಾ ಅಷ್ಟೇ ಅಲ್ಲ ಇಡೀ ಪ್ರಪಂಚದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಪಡೆದುಕೊಂಡಿದ್ದವು. ಯೂಟ್ಯೂಬ್‌ ಹಾಗೂ ಟ್ವಿಟ್ಟರ್‌ಲ್ಲಿ ಬಿಳಿ ಜಿರಾಫೆಗಳ ವಿಡಿಯೋ ಮಿಲಿಯನ್‌ಗಳಷ್ಟು ಜನರು ನೋಡಿದ್ದರು. ಈಗ ಅವುಗಳು ಮನುಷ್ಯನ ಕ್ರೌರ್ಯಕ್ಕೆ ಬಲಿಯಾಗಿವೆ ಎಂಬುದನ್ನ ಅರಗಿಸಿಕೊಳ್ಳಲು ಕಷ್ಟವಾಗಿದೆ. ರಾಷ್ಟ್ರೀಯ ಉದ್ಯಾನವದೊಳಗೆ ಬೇಟೆಯಾಡಿ ಹೊತ್ತೊಯ್ದಿದ್ದಾರೆ ಎನ್ನುತ್ತಿರುವ ಅಧಿಕಾರಿಗಳ ಕಾರ್ಯವೈಖರಿಯನ್ನೂ ಪ್ರಶ್ನೆ ಮಾಡುವಂತಾಗಿದೆ.

ಜಗತ್ತಿನ ವಿರಳ ಸೃಷ್ಟಿ ಬಿಳಿ ಜಿರಾಫೆಗಳು ಇನ್ನು ನೆನಪಿಗಷ್ಟೇ 

ಕೀನ್ಯಾದ ಗರಿಸ್ಸಾದಲ್ಲಿ 72 ಕಿಲೋಮೀಟರ್‌ ಸುತ್ತಳತೆಯಲ್ಲಿ ಇಶಾಕ್ಬಿನಿ ಹಿರೋಲಾ ಎಂಬ ಸಮುದಾಯ ಆಧಾರಿತ ಸಂರಕ್ಷಿತ ಪ್ರದೇಶವನ್ನ ಗುರುತಿಸಲಾಗಿದೆ. ತಾನಾ ನದಿ ತೀರದಲ್ಲಿ ವನ್ಯಜೀವಿಗಳಿಗೆ ಆಹ್ಲಾದಕಾರಿ ವಾತಾವರಣವೂ ಇದೆ. ಅಳಿವಿನಂಚಿನ ಪ್ರಾಣಿಪ್ರಬೇಧ ಹಿರೋಲಾದ ಚಿಗರೆಗಳ ಸಂತಾನ ಅಭಿವೃದ್ಧಿಯನ್ನ ಇಲ್ಲಿ ಮಾಡಲಾಗುತ್ತಿದೆ. ಇದೇ ಇಶಾಕ್ಬಿನಿ ಹಿರೋಲಾದಲ್ಲಿ ಶ್ವೇತ ವರ್ಣದ ಜಿರಾಫೆಗಳು 2017ರಲ್ಲಿ ಕಾಣಿಸಿಕೊಂಡಿದ್ದವು. ಈ ನಿಷೇಧಿತ ಪ್ರದೇಶದ ವ್ಯಾಪ್ತಿಯ ಗ್ರಾಮಸ್ಥನೊಬ್ಬನಿಂದ ಇದು ಇಡೀ ಜಗತ್ತಿಗೆ ತಿಳಿಯುವಂತಾಯ್ತು. ಅದರಲ್ಲಿ ಒಂದು ಜಿರಾಫೆ ತಾಯಿ ಹಾಗೂ ಇನ್ನೊಂದು ಅದರ ಮರಿ. ಪ್ರಕೃತಿಯ ವಿಚಿತ್ರ ಸೃಷ್ಟಿಯ ಧ್ಯೋತಕವಾಗಿದ್ದ ಈ ಅಮಾಯಕ ಪ್ರಾಣಿಗಳನ್ನ ಬೇಟೆಯಾಡಿದ್ದಾರೆ. ಅದರ ಅಸ್ತಿಪಂಜರಗಳೂ ಸಿಕ್ಕಿವೆ ಎಂದು ಅಲ್ಲಿನ ಅಧಿಕಾರಿಗಳು ಹೇಳುವ ಮೂಲಕ ಆಘಾತ ಉಂಟು ಮಾಡಿದ್ದಾರೆ. ಶ್ವೇತ ವರ್ಣದ ಜಿರಾಫೆಗಳು ಎಂದರೆ ಯಾವುದೋ ವಿಶಿಷ್ಟ ಪ್ರಬೇಧವೇನೂ ಅಲ್ಲ, ಆದರೆ ಅದೊಂದು ವಿರಳ ಸೃಷ್ಟಿ. ಗರ್ಭಾವಸ್ಥೆಯಲ್ಲಿ ಚರ್ಮಕೋಶದ ವರ್ಣದ್ರವ್ಯಗಳ ಉತ್ಪತ್ತಿ ವಿಫಲವಾದಾಗ ಈ ತರಹದ ಪ್ರಾಣಿಗಳು ಸೃಷ್ಟಿಯಾಗುತ್ತವೆ. ಇದಕ್ಕೆ ವೈಜ್ಞಾನಿಕ ಭಾಷೆಯಲ್ಲಿ ಲ್ಯೂಸಿಸಂ ಎನ್ನುತ್ತಾರೆ. ಚರ್ಮದ ಬಣ್ಣದ ಹೊರತು ಬೇರೆ ಅವಯವಗಳು ಮಾಮೂಲು ಬಣ್ಣ ಪಡೆದುಕೊಂಡಿರುತ್ತವೆ. ಈ ತರಹದ ಇನ್ನೊಂದು ಜಿರಾಫೆ ತಾಂಜೇನಿಯಾ ರಾಷ್ಟ್ರದಲ್ಲಿದೆ. ಆದರೆ ಅದರ ವಂಶ ಅಭಿವೃದ್ಧಿಯಾಗಿಲ್ಲ. ಇಶಾಕ್ಬಿನಿಯಲ್ಲಿದ್ದ ಜಿರಾಫೆಯ ಮರಿಯೂ ಸಹ ಶ್ವೇತ ವರ್ಣ ಪಡೆದುಕೊಂಡು ಹುಟ್ಟಿತ್ತು. ಆದರೆ ದುರಾದೃಷ್ಟವಶಾತ್‌ ಮರೆಯಾಗಿವೆ.

Two rare white giraffes killed in Kenya

ಜಿರಾಫೆ ಸಂತತಿಗಳೇ ಅಳಿವಿನಂಚಿಗೆ ಬಂದಿರುವ ಕಾಲಘಟ್ಟದಲ್ಲಿ ಈತರಹದ ತಳಿಯ ಸೃಷ್ಟಿಯನ್ನ ಜಾಗರೂಕತೆಯಿಂದ ನೋಡಿಕೊಳ್ಳಬೇಕಿದ್ದ ಅಧಿಕಾರಿಗಳ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಜಿರಾಫೆಗಳ ಮಾಂಸ, ಮೂಳೆಗಳೆಲ್ಲವೂ ಆದಾಯ ತಂದು ಕೊಡುತ್ತವೆ ಹಾಗಾಗಿ ಆಫ್ರಿಕಾ ಖಂಡದಲ್ಲಿ ಒಂದು ದಶಕದಲ್ಲಿ ಶೇ.೪೦ರಷ್ಟು ಜಿರಾಫೆಗಳು ಖಾಲಿಯಾಗಿವೆ ಎಂಬುದು ಆಘಾತಕಾರಿ ವಿಷಯ. ಈಶಾನ್ಯ ಕೀನ್ಯಾದ ಇಜಾರದಲ್ಲಿ ಇವುಗಳನ್ನ ಕೊಲೆ ಮಾಡಲಾಗಿದೆ ಎಂದು ಹೇಳಿಕೆ ನೀಡಿರುವ ಇಶಾಕ್ವಿನಿ ರಕ್ಷಿತಾರಣ್ಯದ ಅಧಿಕಾರಿ ಸುಮ್ಮನಾಗಿದ್ದಾರೆ. ಪರಿಸರ ಹಾಗೂ ವನ್ಯಜೀವಿಗಳು ವಿಶ್ವದ ಆಸ್ತಿಯೆಂದೇ ಪರಿಗಣಿಸಲಾಗುತ್ತದೆ. ಹೀಗೇನಾದರೂ ಪ್ರಾಣಿಸಂಕುಲ ಸಂಕಷ್ಟದಲ್ಲಿದ್ದರೆ ಅಂತಾರಾಷ್ಟ್ರೀಯ ಸಂಸ್ಥೆಗಳು ಇವುಗಳ ಅಧ್ಯಯನಕ್ಕೆ ಬರುತ್ತವೆ. ಅರ್ಥಿಕ ನೆರವನ್ನೂ ನೀಡುತ್ತವೆ, ಆದರೆ ಅದಕ್ಕೆ ಸ್ಥಳೀಯ ಆಡಳಿತ ವ್ಯವಸ್ಥೆ ಅನುವು ಮಾಡಿಕೊಡಬೇಕು. ಇಶಾಕ್ಬಿನಿ ಸಂರಕ್ಷಿತ ಪ್ರದೇಶ ಸಮುದಾಯ ಆಧಾರಿತ ಸಂರಕ್ಷಿತ ಪ್ರದೇಶ. ಈ ವ್ಯವಸ್ಥೆಯಲ್ಲಿ ಅಲ್ಲಿನ ಬುಡಕಟ್ಟು ಜನಾಂಗ ಅಥವಾ ಮೂಲ ನಿವಾಸಿಗಳ ಸಂಸ್ಕೃತಿಗೆ ಧಕ್ಕೆಯಾಗದ ಹಾಗೆ ಅರಣ್ಯಗಳನ್ನ ಸಂರಕ್ಷಣೆ ಮಾಡಲಾಗುತ್ತೆ. ಈ ಶ್ವೇತ ವರ್ಣ ಜಿರಾಫೆಗಳಿಗೂ ಕೂಡ ಇದೇ ವ್ಯವಸ್ಥೆ ಮುಳುವಾಗಿರಬಹುದು.

ಕೀನ್ಯಾದಂತ ರಾಷ್ಟ್ರಗಳಲ್ಲಿ ವನ್ಯಜೀವಿಗಳ ಬೇಟೆಯನ್ನ ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದೂ ಗೊತ್ತಿದೆ. ಈ ಜಿರಾಫೆಗಳು ಮರೆಯಾಗಿ ನಾಲ್ಕು ತಿಂಗಳಾಗಿದ್ದರೂ ಇಲ್ಲಿನ ಅಧಿಕಾರಿಗಳು ಬಾಯಿಬಿಟ್ಟಿಲ್ಲ, ಇದುವರೆಗೆ ಇವುಗಳ ಚಲನವಲಗಳ ಅಧ್ಯಯನ ನಡೆದಿಲ್ಲ, ವರದಿಯೂ ಇಲ್ಲ ಎಂಬುದು ಆಘಾತಕಾರಿ ವಿಷಯ. ಇದು ಬರೀ ಕೀನ್ಯಾ ದೇಶದ ಸಮಸ್ಯೆಯೇನಲ್ಲ. ನಮ್ಮ ದೇಶದಲ್ಲಿ ಶಿಕಾರಿ ವೀರರ ಸಂಖ್ಯೆಯೇನು ಕಡಿಮೆ ಇಲ್ಲ. ರಾಜಕಾರಣಿಗಳು, ನಟರು ಹಾಗೂ ಅಧಿಕಾರಿಗಳ ಮಕ್ಕಳೇ ಪ್ರಾಣಿಗಳನ್ನ ಕೊಂದು ರಾಜಾರೋಷವಾಗಿ ಓಡಾಡುವುದನ್ನ ನೋಡಿದ್ದೇವೆ. ೨೦೧೮ರಲ್ಲಿ ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಬ್ಲೂ ಬುಲ್‌ ಅಥವಾ ನೀಲ್‌ಗಾಯ್‌ ಕಾಣಿಸಿಕೊಂಡಿತ್ತು. ಸಾಮಾನ್ಯವಾಗಿ ಈ ಹವಾಗುಣದಲ್ಲಿ ಅವುಗಳ ಸಂತತಿ ನೆಲೆಸುವುದಿಲ್ಲ. ಮಹಾರಾಷ್ಟ್ರ ಹಾಗೂ ಮಧ್ಯ ಪ್ರದೇಶದಲ್ಲಿ ಕಂಡು ಬರುವ ವಿರಳ ಪ್ರಾಣಿ ಪ್ರಬೇಧ ನೀಲ್‌ಗಾಯ್‌ ದಶಕಗಳ ಹಿಂದೆ ಬಂಡೀಪುರದ ಭಾಗದಲ್ಲಿ ಕಾಣಿಸಿಕೊಂಡಿತ್ತಂದೆ. ಈ ಘಟನೆಯ ಬಗ್ಗೆ ಇಂದಿಗೂ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ವರದಿಯೂ ನೀಡಿಲ್ಲ. ಹೀಗೆ ಅಪರೂಪದ ಪ್ರಾಣಿಗಳು ಕಾಣಿಸಿಕೊಂಡರೆ ಅವುಗಳ ಬಗ್ಗೆ ಮೊದಲು ಅಧಿಕಾರಿಗಳಿಗೆ ಕುತೂಹಲ ಹುಟ್ಟಬೇಕು. ಮಾರ್ಚ್‌ ೮ರಂದು ಬಂಡೀಪುರದಲ್ಲಿನ ಸಿಬ್ಬಂದಿ ಆನೆಗೆ ರಬ್ಬರ್‌ ಬುಲೆಟ್‌ ಫೈರ್‌ ಮಾಡಿದ್ದ ವಿಡಿಯೋ ವೈರಲ್‌ ಆಗಿತ್ತು. ಆ ಸಿಬ್ಬಂದಿಗಳೇ ತಮ್ಮ ಪರಾಕ್ರಮದ ವಿಡಿಯೋ ಹರಿಬಿಟ್ಟಿದ್ದರು. ಇಂತಹ ಘಟನೆಗಳಿಂದ ನಾವು ಕಲಿಯೋ ಪಾಠಗಳೂ ಕಳ್ಳಬೇಟೆಯೇ ಹೊರತೂ ಮತ್ತೇನೂ ಅಲ್ಲ.

Click here Support Free Press and Independent Journalism

Pratidhvani
www.pratidhvani.com