ಕರೋನಾ ವೈರಾಣುಗಳು ಹಬ್ಬಿದ್ದು ಚೀನಾದ ಟಾಪ್ ಪ್ರಯೋಗಾಲಯದಿಂದಲೇ?
ರಾಷ್ಟ್ರೀಯ

ಕರೋನಾ ವೈರಾಣುಗಳು ಹಬ್ಬಿದ್ದು ಚೀನಾದ ಟಾಪ್ ಪ್ರಯೋಗಾಲಯದಿಂದಲೇ?

ಚೀನಾದ ಅಗ್ರ ವಿಜ್ಞಾನಿಗಳು ಹಾಗೂ genomics ತಜ್ಞರ ತಂಡವೊಂದು ಇಲ್ಲಿನ ChinaXiv ನಿಯತಕಾಲಿಕೆಯಲ್ಲಿ ಅಂಕಣವೊಂದನ್ನು ಬರೆದಿದ್ದು, ಈ ಕರೋನಾ ವೈರಾಣುಗಳು ಉನ್ನತ ಮಟ್ಟದ ಪ್ರಯೋಗಾಲಯವೊಂದರಿಂದ ಹಬ್ಬಿರುವ ಸಾಧ್ಯತೆಗಳಿವೆ ಎನ್ನುತ್ತಿದ್ದಾರೆ.

ಸಮಚಿತ್ತ

ಜನವರಿ 21ರಿಂದಲೂ ಚೀನಾದ್ಯಂತ ವ್ಯಾಪಕವಾಗಿ ಪಸರಿಸಿಕೊಂಡು, 2670ಕ್ಕೂ ಹೆಚ್ಚು ಜೀವಗನ್ನು ಬಲಿ ತೆಗೆದುಕೊಂಡಿದ್ದಲ್ಲದೇ, ಹೆಚ್ಚೂ ಕಮ್ಮಿ 80,000 ಮಂದಿಗೆ ಬಾಧಿಸಿ, ಜಗತ್ತಿನಾದ್ಯಂತ ಭೀತಿ ಮೂಡಿಸಿರುವ ಕರೋನಾ ವೈರಾಣುಗಳು ಎಲ್ಲಿಂದ ಮೊದಲು ಹಬ್ಬಿದವು ಎಂಬ ಕುರಿತಂತೆ ಸಾಕಷ್ಟು theoryಗಳು ಹಾಗೂ hypothesisಗಳು ಹುಟ್ಟಿಕೊಳ್ಳುತ್ತಿವೆ.

ಇಂಥ ಸಾಧ್ಯತೆಗಳ ನಡುವೆ ಬಲವಾದ possibility ಒಂದು ಪುಷ್ಟಿ ಪಡೆದುಕೊಂಡಿದೆ.  SARSನಂಥ ಪೈಶಾಚಿಕ ವೈರಾಣುಗಳ ಕುರಿತು ಉನ್ನತ ಮಟ್ಟದ ಅಧ್ಯಯನ ಮಾಡುವ ವುಹಾನ್‌ನ ಪ್ರಯೋಗಾಲಯವೊಂದರಲ್ಲಿ ಉಂಟಾದ ಲೀಕಿಂಗ್‌ನಿಂದಾಗಿ ಈ 2019 nCoV ವೈರಾಣುಗಳು ಸುತ್ತಲಿನ ವಾತಾವರಣಕ್ಕೆ ಪಸರಿರುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.

ಚೀನಾದ ಅಗ್ರ ವಿಜ್ಞಾನಿಗಳು ಹಾಗೂ genomics ತಜ್ಞರ ತಂಡವೊಂದು ಇಲ್ಲಿನ ChinaXiv ನಿಯತಕಾಲಿಕೆಯಲ್ಲಿ ಅಂಕಣವೊಂದನ್ನು ಬರೆದಿದ್ದು, ಈ ಕರೋನಾ ವೈರಾಣುಗಳು ಉನ್ನತ ಮಟ್ಟದ ಪ್ರಯೋಗಾಲವೊಂದರಿಂದ ಹಬ್ಬಿರುವ ಸಾಧ್ಯತೆಗಳಿವೆ ಎನ್ನುತ್ತಿದ್ದಾರೆ. ಚೀನಾದ ಟಾಪ್‌ ವೈಜ್ಞಾನಿಕ ಸಂಸ್ಥೆಗಳಾದ Tropical Botanical Garden of Chinese Academy of Sciences, South China Agricultural University, ಹಾಗೂ Chinese Institute for Brain Research ಸಂಶೋಧಕರ ತಂಡವೊಂದು ಈ ಅಂಕಣ ಬರೆದಿದ್ದು, ಇದಕ್ಕೆ ಸಾಕ್ಷೀಕರಿಸುವ ತಮ್ಮಲ್ಲಿ genomic evidences ಇವೆ ಎಂದು ಈ ತಂಡ ಹೇಳಿಕೊಳ್ಳುತ್ತಿದೆ.

ಇದುವರೆಗೂ, ಹುನಾನ್‌ನ seafood ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಮಾರಾಟವಾಗುವ ಪ್ರಾಣಿಗಳೇ ಕರೋನಾ ವೈರಾಣುಗಳ ಮೂಲವೆಂದು ನಂಬಲಾಗಿದೆ.

ಚೀನಾದ ಮೊದಲ Biosafety Level 4 ಪ್ರಯೋಗಾಲಯವಾದ ವುಹಾನ್‌ ವೈರಾಲಜಿ ಸಂಸ್ಥೆಯಲ್ಲಿ ಜಗತ್ತಿನ ಅತ್ಯಂತ ಅಪಾಯಕಾರಿ ವೈರಾಣುಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಈ ವೈರಾಣುಗಳು ಸುತ್ತಲಿನ ವಾತಾವವರಣಕ್ಕೆ ಪಸರದಂತೆ ಪ್ರಯೋಗಾಲಯದಲ್ಲಿ ಭಾರೀ ಬಿಗಿಯ ವಾತಾವರಣವನ್ನು ಸುತ್ತಲೂ ಕಾಪಾಡಿಕೊಳ್ಳಬೇಕಾಗುತ್ತದೆ.

ಈ 2019 nCOv ವೈರಾಣುಗಳು ಕಳೆದ ನವೆಂಬರ್‌ನಲ್ಲೇ ಹೊರಬಂದಿದ್ದು, ಡಿಸೆಂಬರ್‌ ವೇಳೆಗೆ ಇಲ್ಲಿನ ಗಾಳಿಯಲ್ಲಿ ವೈರಲ್ ಆಗಿವೆ ಎನ್ನುವ ಈ ಅಧ್ಯಯನವು, ವೈರಾಣುಗಳ ಪಸರುವಿಕೆಗೆ ವುಹಾನ್‌ನಲ್ಲಿರುವ ಸೀಫುಡ್‌ ಮಾರುಕಟ್ಟೆಯ ವಾತಾವರಣ ನೆರವವಾಗಿದೆ ಎನ್ನುತ್ತಿದೆ. ಈ ಸೀಫುಡ್‌ ಮಾರುಕಟ್ಟೆಯಲ್ಲಿ ಮಾರಾಟವಾಗುವ ಮಾಂಸದಿಂದ ಜನರಿಗೆ ವೈರಾಣುಗಳು ಮತ್ತಷ್ಟು ವ್ಯಾಪಕವಾಗಿ ಪಸರಿದೆ ಎಂಬ ಸಂಶಯ ಬಲವಾಗಿದೆ. ಇದೇ ಕಾರಣಕ್ಕಾಗಿ ವರ್ಷದ ಮೊದಲ ದಿನದಿಂದಲೇ ಈ ಸೀಫುಡ್ ಮಾರ್ಕೆಟ್‌ಅನ್ನು ಮುಚ್ಚಲಾಗಿದೆ.

ಕರೋನಾ ವೈರಾಣುಗಳು ಹಬ್ಬಿದ್ದು ಚೀನಾದ ಟಾಪ್ ಪ್ರಯೋಗಾಲಯದಿಂದಲೇ?
http://truthprofoundationindia.com/

ಜಾಗತಿ ಮಟ್ಟದಲ್ಲಿ influenza virusಗಳ ಮಾಹಿತಿ ಕೋಶವನ್ನು ಹೊಂದಿರುವ GISAID EpiFlu ಎಂಬ ಭಂಡಾರದಲ್ಲಿ ಕರೋನಾ ವೈರಾಣುಗಳ 93 ಸ್ಯಾಂಪಲ್‌ಗಳನ್ನು ಸಂಗ್ರಹಿಸಿಕೊಂಡಿರುವ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಮಾನವನಿಂದ ಮಾನವನಿಗೆ ಈ ವೈರಾಣುಗಳು ಪಸರುವ ಬಗೆಯನ್ನು ಈ ಸಂಶೋಧಕರು ಅಧ್ಯಯನ ಮಾಡಿದ್ದಾರೆ.

12 ದೇಶಗಳಿಂದ ತೆಗೆದುಕೊಳ್ಳಲಾದ ಈ ಸ್ಯಾಂಪಲ್‌ಗಳಲ್ಲಿ 54 ಸ್ಯಾಂಪಲ್‌ಗಳನ್ನು ಜನವರಿ 22ಕ್ಕೂ ಮುಂಚೆ ಚೀನಾದಿಂದ ಬಂದರೆ, ಮಿಕ್ಕ 39 ಸ್ಯಾಂಪಲ್‌ಗಳು ಫ್ರಾನ್ಸ್‌, ಆಸ್ಟ್ರೇಲಿಯಾ, ಜಪಾನ್ ಹಾಗೂ ಅಮೆರಿಕಾದಿಂದ ಜನವರಿ 22ರ ಬಳಿಕ ತೆಗೆದುಕೊಳ್ಳಲಾಗಿದೆ.

ನಿಜಕ್ಕೂ ಈ ವೈರಾಣುಗಳು ಪಸರಲು ಮೂಲವಾಗಿರುವುದು ಕೇವಲ ಇದೊಂದೇ ಮಾರುಕಟ್ಟೆಯೇ ಎಂಬ ಕುರಿತ ಅಧ್ಯಯನವು ಈ ಸಾಂಕ್ರಮಿಕ ಮತ್ತಷ್ಟು ವ್ಯಾಪಕವಾಗದಂತೆ ತಡೆಯಲು ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಕರೋನಾ ವೈರಾಣುಗಳು ಹಬ್ಬಿದ್ದು ಚೀನಾದ ಟಾಪ್ ಪ್ರಯೋಗಾಲಯದಿಂದಲೇ?
http://truthprofoundationindia.com/

ಈ ವೈರಾಣುಗಳು ವೈರಲ್ ಆಗುತ್ತಲೇ ಗಂಭೀರ ಎಚ್ಚರಿಕೆಯೊಂದನ್ನು ಚೀನಾದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ರವಾನೆ ಮಾಡಿದರೂ ಸಹ ಇದನ್ನು ಗಂಭೀರವಾಗಿ ದೇಶವಾಸಿಗಳಿಗೆ ತಲುಪಿಸುವಲ್ಲಿ ವಿಫಲವಾದ ಕಾರಣ ಈ ಅವಾಂತರವಾಗಿದೆ ಎನ್ನಲಾಗುತ್ತಿದೆ. ಮೊದಲೇ ಸರಿಯಾಗಿ ವಾರ್ನಿಂಗ್ ಕೊಟ್ಟಿದ್ದಲ್ಲಿ ಕರೋನಾ ವೈರಾಣುಗಳು ಮಾಡಿರುವ ಡ್ಯಾಮೇಜ್‌ಅನ್ನು ಸಾಕಷ್ಟು ಕಡಿಮೆ ಮಾಡಬಹುದಾಗಿತ್ತು ಎನ್ನಲಾಗಿದೆ.

ಜನವರಿ 23ರಂದು ವುಹಾನ್‌ ನಗರವನ್ನುlockdown ಮಾಡುವ ವೇಳೆಗಾಗಲೇ, ಈ ವೈರಾಣುಗಳ ಪಸರಿಕೆಯ ರಿಪೋರ್ಟಿಂಗ್ ಮಾಡಿ ವಾರಗಳು ಕಳೆದಿದ್ದವು. ವುಹಾನ್‌ ನಗರವನ್ನು ಬಿಟ್ಟು ಹೋಗದಂತೆ ಅಲ್ಲಿನ ವಾಸಿಗಳಿಗೆ ತಡೆಯೊಡ್ಡುವ ಮುನ್ನವೇ ಮಿಲಿಯನ್‌ಗಟ್ಟಲೇ ಜನರು ಈ ಊರಿಂದ ಹೊರಹೋಗಿದ್ದರು.

Click here Support Free Press and Independent Journalism

Pratidhvani
www.pratidhvani.com