ಗಾಂಧೀಜಿಯ ಆ ಒಂದು ಪತ್ರ ವೃದ್ಧ ಜೀವವನ್ನೇ ಬದುಕಿಸಿತು

ಗಾಂಧೀಜಿಯವರ ಈ ಪತ್ರ ದೊಡ್ಡ ಮೇಟಿ ಯವರ ತಾಯಿಯವರಿಗೆ ಬದುಕಲು ಸಂಜೀವಿನಿಯಾಯಿತು ತೀವ್ರ ಅನಾರೋಗ್ಯ ದಿಂದ ಬಳಲುತ್ತಿದ್ದ ಬಸಮ್ಮನವರು ತಮ್ಮ ಮಗ ಜೈಲಿನಿಂದ ಬಿಡುಗಡೆಯಾದ ನಂತರ ಕೆಲ ವರ್ಷ ಜೀವಹಿಡಿದುಕೊಂಡಿದ್ದರು.
ಗಾಂಧೀಜಿಯ ಆ ಒಂದು  ಪತ್ರ ವೃದ್ಧ ಜೀವವನ್ನೇ ಬದುಕಿಸಿತು

ಗಾಂಧೀಜಿಯವರು ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ ಮೇಲೆ ಇಲ್ಲಿಯ ಜನರ ಜೀವನ ಮೇಲೆ ಸತ್ಪರಿಣಾಮ ಉಂಟಾಯಿತು ಎಂಬುದು ಎಲ್ಲರಿಗೂ ಗೊತ್ತು. ಆದರೆ ಗಾಂಧೀಜಿ ತಮಗೆ ಬಂದ ಪತ್ರಕ್ಕೆ ಸ್ಪಂದಿಸಿ, ತಾವೂ ಒಂದು ಪತ್ರ ಬರೆದು ಅಂದಾನಪ್ಪ ದೊಡ್ಡಮೇಟಿ ಅವರ ತಾಯಿಯ ಜೀವ ಉಳಿಸಿದ್ದು ಹಲವರಿಗೆ ಗೊತ್ತಿಲ್ಲ.

ಆ ಕತೆ ಹೀಗಿದೆ,

1940 ಡಿಸೆಂಬರ್ 8 ಮಹಾತ್ಮಗಾಂಧೀಜಿಯವರು ವೈಯಕ್ತಿಕ ಸತ್ಯಾಗ್ರಹದ ಆಂದೋಲನಕ್ಕೆ ಕರೆನೀಡಿದ ದಿನಗಳವು.. ಇಡೀ ರಾಷ್ಟ್ರದ ತುಂಬೆಲ್ಲಾ ಈ ಸತ್ಯಾಗ್ರಹ ಕಾವು ಪಡೆದುಕೊಂಡು.. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಬಿರುಸು ಪಡೆಯಿತು.. ಜಕ್ಕಲಿಯಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂದಿನ ಬಯಲಿನಲ್ಲಿ ಈ ಭಾಗದ ಆಂದೋಲನದ ಕರ್ಣಧಾರತ್ವ ವಹಿಸಿದ್ದ ಅಂದಾನಪ್ಪ ದೊಡ್ಡಮೇಟಿ ಯವರನ್ನು ಅವರ ಅನೇಕ ಸಂಗಡಿಗರನ್ನು ಕೈದು ಮಾಡಿ ಧಾರವಾಡ ದ ವಿಶೇಷ ನ್ಯಾಯಾಧೀಶರ ಮುಂದೆ ಖಟ್ಲೆ ನಡಿಸಿದರು.. ಅಂದಾನಪ್ಪ ದೊಡ್ಡಮೇಟಿ ಯವರಿಗೆ ಒಂದು ವರ್ಷದ ಶಿಕ್ಷೆ ವಿಧಿಸಲು ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಡಲಾಯಿತು.

ಆಗ ಅಂದಾನಪ್ಪ ದೊಡ್ಡಮೇಟಿ ಯವರು. ಸೇವಾಗ್ರಾಮದಲ್ಲಿದ್ದ ಮಹಾತ್ಮ ಗಾಂಧೀಜಿಯವರಿಗೆ
ತಮ್ಮ ತಾಯಿ ಬಸಮ್ಮನವರ ಆರೋಗ್ಯ ವಿಷಮಿಸಿದ ಬಗ್ಗೆ ಬರೆಯುತ್ತಾ, "ಒಬ್ಬನೇ ಮಗನಾದ ನನ್ನನ್ನು ನೋಡಲು ನನ್ನ ತಾಯಿ ಆಕಾಂಕ್ಷೆ ಹೊಂದಿದ್ದರೂ.. ಬಿಡುಗಡೆ ಗಾಗಿ ನಾನು ಸರಕಾರವನ್ನು ಕೇಳಬಾರದೆಂದೇ ನಿರ್ಧರಿಸಿರುವೆ.. ಇದೇಡಿಸೆಂಬರ್ 10 ಕ್ಕೆ(1941) ನನ್ನ ಬಿಡುಗಡೆ ಯ ಅವಧಿಯು ಮುಗಿಯುವದು. ತಾಯಿಗೆ ನಿಮ್ಮಲ್ಲಿ ತುಂಬಾ ವಿಶ್ವಾಸ.. ಚೈತನ್ಯ ದಾಯಕ ಸಂದೇಶವನ್ನು ಕಳುಹಿಸಬೇಕಾಗಿ ವಿನಂತಿ, ಎಂದು ಕಾಗದವನ್ನು.,ಜೊತೆಗೆ ತಂತಿ ಯನ್ನು ಮಹಾತ್ಮಗಾಂಧೀಜಿಯವರಿಗಕಳಿಸಿದರು.

ಮಹಾತ್ಮ ಗಾಂಧೀಜಿಯವರು, ಸ್ವಾತಂತ್ರ್ಯ ಯೋಧ ಅಂದಾನಪ್ಪ ದೊಡ್ಡಮೇಟಿ ಯವರಿಗೆ ಹಾಗೂ ಅವರ ತಾಯಿ ಶ್ರೀಮತಿ ಬಸಮ್ಮ ಜ್ಞಾನಪ್ಪ ದೊಡ್ಡಮೇಟಿ ಯವರಿಗೆ ಬರೆದ ಸ್ವ ಹಸ್ತಾಕ್ಷರ ರದ ಪತ್ರ.
ಮಹಾತ್ಮ ಗಾಂಧೀಜಿಯವರು, ಸ್ವಾತಂತ್ರ್ಯ ಯೋಧ ಅಂದಾನಪ್ಪ ದೊಡ್ಡಮೇಟಿ ಯವರಿಗೆ ಹಾಗೂ ಅವರ ತಾಯಿ ಶ್ರೀಮತಿ ಬಸಮ್ಮ ಜ್ಞಾನಪ್ಪ ದೊಡ್ಡಮೇಟಿ ಯವರಿಗೆ ಬರೆದ ಸ್ವ ಹಸ್ತಾಕ್ಷರ ರದ ಪತ್ರ.

ಅದಕ್ಕೆ ತೀವ್ರ ವಾಗಿ ಸ್ಪಂದಿಸಿದ ಮಹಾತ್ಮಾಜಿಯವರು.. ದೊಡ್ಡ ಮೇಟಿಯವರ ತಂತಿಗೆ ಉತ್ತರವಾಗಿ 1.10.1940.ರಂದು ಸ್ವಹಸ್ತಾಕ್ಷರಗಳಲ್ಲಿ.. ಅಂದಾನಪ್ಪದೊಡ್ಡ ಮೇಟಿಯವರ ತಾಯಿ ಶ್ರೀಮತಿ ಬಸಮ್ಮನವರಿಗೆ ಪತ್ರ ಬರೆದು ಧೈರ್ಯ ಹಾಗು ಅಭಯದ ಬಗ್ಗೆ ವಿಶ್ವಾಸ ತುಂಬಿದರು..
ಅದರಂತೆ ಅಂದಾನಪ್ಪ ದೊಡ್ಡಮೇಟಿ ಯವರಿಗೆ ಸಂತೋಷ ವ್ಯಕ್ತಪಡಿಸಿ ಪತ್ರವನ್ನು ಬರೆದರು..
ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಲ್ಲಿ ಭಾಗವಹಿಸಿದವರ ಬಗ್ಗೆ ಅವರು ವಹಿಸುತ್ತಿದ್ದ ಕಾಳಜಿಗಳು.. ಅವರ ಕುಟುಂಬದ ಇತರ ಸದಸ್ಯರ ಬಗ್ಗೆ ಇರುವ ಗೌರವವಗಳಿಗೆ ಇದು ಸಾಕ್ಷಿಯಾಗಿದೆ. ಮಹಾತ್ಮ ಗಾಂಧೀಜಿಯವರ ದು ಮಾತೃಹೃದಯ ತಮ್ಮೊಡನಾಡಿಗಳ ನೋವುಗಳನ್ನು ಕಂಡು ತೀವ್ರ ವಾಗಿ ಸ್ಪಂದಿಸಿದ್ದರಿಂದ ಅವರೊಂದಿಗೆ ಜನಸಾಮಾನ್ಯರೂ ಐತಿಹಾಸಿಕ ಭಾರತೀಯ ರಾಷ್ಟ್ರೀ ಆಂದೋಲನದ ಭಾಗವಾದರು...ಮಹಾತ್ಮಜಿವರಿಗೆ ಸಾವು ಇಲ್ಲವೇ ಇಲ್ಲ..!.ಅವರು ಸದಾ ಇರುತ್ತಾರೆ ಜಗತ್ತಿನಲ್ಲಿ ಪ್ರೀತಿ.. ಅಹಿಂಸೆ ಯ ಸತ್ಯದ ಪ್ರತಿ ಪಾದಕರಾಗಿ ಹರಡುತ್ತಾರೆ..
ಮಹಾತ್ಮ ಗಾಂಧೀಜಿಯವರ ಈ ಪತ್ರ ದೊಡ್ಡ ಮೇಟಿ ಯವರ ತಾಯಿಯವರಿಗೆ ಬದುಕಲು ಸಂಜೀವಿನಿಯಾಯಿತು ತೀವ್ರ ಅನಾರೋಗ್ಯ ದಿಂದ ಬಳಲುತ್ತಿದ್ದ ಬಸಮ್ಮನವರು ತಮ್ಮಮಗ ಜೈಲಿನಿಂದ ಬಿಡುಗಡೆಯಾಗುವವರೆಗೂ ನಂತರ ಕೆಲವರ್ಷ ಜೀವಹಿಡಿದುಕೊಂಡಿದ್ದರು!

ಇದನ್ನು ‘ಪ್ರತಿಧ್ವನಿ’ ತಂಡಕ್ಕೆ ತಿಳಿಸಿದ ಅದೇ ಕುಟುಂಬದವರಾದ ರವೀಂದ್ರ ದೊಡ್ಡಮೇಟಿ ಆ ಪತ್ರವನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ.

ರವೀಂದ್ರನಾಥ ಅವರು, “ಗಾಂಧೀಜಿ ಬರೀ ಒಬ್ಬ ವ್ಯಕ್ತಿ ಅಥವಾ ಹೆಸರು ಅಲ್ಲ, ಅವರೆಂದರೆ ಒಂದು ಶಕ್ತಿ. ನಮ್ಮ ಭಾಗದ ಜನರು ಗಾಂಧೀಜಿ ಭೇಟಿ ಕೊಟ್ಟು ಹೋಗುವಾಗ ಅವರ ತುಳಿದ ಹೋದ ಹೆಜ್ಜೆಯ ಗುರುತಿದ್ದ ಮಣ್ಣನ್ನು ತಮ್ಮ ಸೆರಗಿನಲ್ಲಿ ಕಟ್ಟಿಕೊಂಡಿದ್ದರು. ಗಾಂಧೀಜಿ ಹುತಾತ್ಮರಾದ ದಿನದಂದು ಕೆಲವರು ಚಪ್ಪಲಿ ಧರಿಸುವುದಿಲ್ಲವೆಂದು ನಿರ್ಧರಿಸಿದರು, ಕೆಲವರು ಸಿಹಿ ತಿನ್ನುವುದು ನಿಲ್ಲಿಸಿದರು, ಇವತ್ತಿಗೂ ಗಾಂಧೀಜಿ ಬಗ್ಗೆ ನಮ್ಮ ಹಿರಿಯರು ಹೇಳಿದ ಮಾತು ಗುಂಗು ಹಿಡಿಸುತ್ತಲೇ ಇವೆ”.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com