ಭಾರತದಲ್ಲಿ 3000 ದಾಟಿದ ಕರೋನಾ ಸೋಂಕಿತರ ಸಂಖ್ಯೆ

ಭಾರತದಲ್ಲಿ 3000 ದಾಟಿದ ಕರೋನಾ ಸೋಂಕಿತರ ಸಂಖ್ಯೆ

ಪ್ರತಿಧ್ವನಿ ವರದಿ

ಕರ್ನಾಟಕದಲ್ಲಿ ಇಂದು ಹದಿನಾರುಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟು ಸೋಂಕು ಧೃಢಪಟ್ಟವರ ಸಂಖ್ಯೆ 144 ತಲುಪಿದೆ. ರಾಜ್ಯದ ಹದಿನಾರುಜಿಲ್ಲೆಗಳಲ್ಲಿ ಸೋಂಕು ಹರಡಿದ್ದು, ಮೈಸೂರಿನಲ್ಲಿ 7, ಬೆಂಗಳೂರಿನಲ್ಲಿ 4, ಮಂಗಳೂರಿನಲ್ಲಿ 3, ಬಳ್ಳಾರಿಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.    

ಅಮೆರಿಕಾ ಮಾಧ್ಯಮಗಳ ಬದ್ಧತೆ ಭಾರತದ ಮಾಧ್ಯಮಗಳಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲವೇಕೆ?

ಅಮೆರಿಕಾ ಮಾಧ್ಯಮಗಳ ಬದ್ಧತೆ ಭಾರತದ ಮಾಧ್ಯಮಗಳಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲವೇಕೆ?

ಮೊಹಮ್ಮದ್‌ ಇರ್ಷಾದ್‌

ಕರೋನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಗಮನಸೆಳೆಯುವ ಲಾಕ್‌ಡೌನ್‌ ಹೊರತಾಗಿ ಬೇರೆಲ್ಲ ವಿಚಾರದಲ್ಲಿ ಭಾರತ ಹಿಂದೆ ಬಿದ್ದಿದೆ. ಸಮರ್ಪಕವಾದ ವೈದ್ಯಕೀಯ ಸೌಲಭ್ಯಗಳಿಲ್ಲ, ಪ್ರಶ್ನೆ ಮಾಡಿದ ವೈದ್ಯರ ಮೇಲೆ ಕೇಸುಗಳಾಗುತ್ತವೆ, ವಲಸೆ ಕಾರ್ಮಿಕರ ಗೋಳು ಕೇಳುವವರಿಲ್ಲ, ಕೇಂದ್ರದಿಂದ ಬಿಡುಗಡೆಯಾದ ಹಣ ಇನ್ನೂ ಬಡ ಮಂದಿಯ ಕೈ ಸೇರಿಲ್ಲ. ಸಮುದಾಯಕ್ಕೆ ಹರಡುವುದನ್ನುತಡೆಗಟ್ಟಲು ಬೇಕಾದ ಯಾವೊಂದು ಸೌಲಭ್ಯಗಳೂ ಸರಕಾರದ ಬಳಿಯಿಲ್ಲ. 

ಗಾಳಿಯಲ್ಲೂ ಹರಡುವುದೇ ಕರೋನಾ? ಹೊಸ ಸಂಶೋಧನೆ ಹೇಳುವುದೇನು?

ಗಾಳಿಯಲ್ಲೂ ಹರಡುವುದೇ ಕರೋನಾ? ಹೊಸ ಸಂಶೋಧನೆ ಹೇಳುವುದೇನು?

ಶಶಿ ಸಂಪಳ್ಳಿ

ಜನದಟ್ಟಣೆ, ಮೂಢನಂಬಿಕೆಗಳು, ಧರ್ಮ-ದೇವರ ಕುರಿತ ಮೌಢ್ಯಾಚರಣೆಗಳು ಒಂದು ಕಡೆಯಾದರೆ, ಮತ್ತೊಂದು ಕಡೆ ಮಾಸ್ಕ್, ಗ್ಲೋಸ್ ನಂತಹ ಸುರಕ್ಷಾ ಸಾಧನಗಳ ತೀವ್ರ ಕೊರತೆ ಎದುರಿಸುತ್ತಿರುವ ಹೊತ್ತಲ್ಲಿ ಸಹಜ ಉಸಿರಾಟ- ಮಾತಿನ ವೇಳೆ ಹೊರಬೀಳುವ ಸೂಕ್ಷ್ಮ ಆವಿ ಕಣಗಳ ಮೂಲಕವೂ ಗಾಳಿಯಲ್ಲಿ ಸೋಂಕು ಹರಡಬಹುದು ಎಂಬ ಹೊಸ ಸಂಶೋಧನೆಗಳು ನಿಜಕ್ಕೂ ಆಘಾತಕಾರಿ.

ಚಪ್ಪಾಳೆ ತಟ್ಟಿಸುವ, ದೀಪ ಹಚ್ಚಿಸುವ ಪ್ರಧಾನಿ ಮೋದಿ ನಿರ್ಧಾರ ಮೂರ್ಖತನದ್ದೇ? ಜಾಣತನದ್ದೇ?

ಚಪ್ಪಾಳೆ ತಟ್ಟಿಸುವ, ದೀಪ ಹಚ್ಚಿಸುವ ಪ್ರಧಾನಿ ಮೋದಿ ನಿರ್ಧಾರ ಮೂರ್ಖತನದ್ದೇ? ಜಾಣತನದ್ದೇ?

ರೇಣುಕಾ ಪ್ರಸಾದ್ ಹಾಡ್ಯ

ಸೋಂಕು ಪೀಡಿತರ ಕುರಿತಂತೆ ಸರ್ಕಾರದ ಪರವಾಗಿರುವ ಮಾಧ್ಯಮಗಳು ಆಯ್ದ ಪ್ರಕರಣಗಳಲ್ಲಿ ಹೆಚ್ಚು ಆಸಕ್ತಿ ವಹಿಸಿ ಪ್ರಚಾರ ನೀಡುತ್ತಿವೆ. ದಕ್ಷಿಣ ಭಾರತದ ಎರಡು ಪ್ರಮುಖ ಧಾರ್ಮಿಕ- ಆಧ್ಯಾತ್ಮಿಕ ಕೇಂದ್ರದಲ್ಲಿ ನಡೆದ ಭಕ್ತಗಣ ಸಮಾಗಮದಲ್ಲಿ ಪಾಲ್ಗೊಂಡಿದ್ದ ವಿದೇಶಿಯರು ಮತ್ತು ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದ ದೇಶಿಯರು ಕ್ವಾರಂಟೈನ್ ನಲ್ಲಿ ಇದ್ದಾರೆಂಬ ವರದಿಗಳಿಗೆ ಹೆಚ್ಚಿನ ಮಹತ್ವ ಬಂದಿಲ್ಲ.

ಕೋವಿಡ್‌ 19: ದೇಶದಲ್ಲಿ ಹೆಚ್ಚುತ್ತಿದೆ ನಕಲಿ ಸುದ್ದಿಗಳ ಹಾವಳಿ

ಕೋವಿಡ್‌ 19: ದೇಶದಲ್ಲಿ ಹೆಚ್ಚುತ್ತಿದೆ ನಕಲಿ ಸುದ್ದಿಗಳ ಹಾವಳಿ

ಕೋವರ್ ಕೊಲ್ಲಿ ಇಂದ್ರೇಶ್

ದೇಶದಲ್ಲಿ ಕೋವಿಡ್‌ 19 ಸೋಂಕಿನ  ಭೀತಿ  ಇಡೀ ದೇಶವನ್ನೇ ಅವರಿಸಿಕೊಂಡಿರುವಈ ಸಂದರ್ಭದಲ್ಲಿ ನಕಲಿ ಸುದ್ದಿಗಳ ಸೃಷ್ಟಿಕರ್ತರಿಗೆ  ಹಬ್ಬವೇ ಅಗಿದೆ. ಸುಮ್ಮನೇ ನಕಲಿ ವೀಡಿಯೋವೊಂದನ್ನೋ ಇಲ್ಲವೋ ಸುದ್ದಿಯೊಂದನ್ನು ಜನಪ್ರಿಯ ಟಿವಿ ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ಬ್ರೇಕಿಂಗ್‌ ನ್ಯೂಸ್‌ ಎಂದು ಸೃಷ್ಟಿಸುತ್ತಾರೆ. ಎಲ್ಲೋ ನಡೆದ ಘಟನೆಯವೀಡಿಯೋವನ್ನು ಇನ್ನೆಲ್ಲೋ ನಡೆದ ಘಟನೆ ಎಂದೂ ಶೀರ್ಷಿಕೆ  ಹಾಕಿ ಪ್ರಸರಿಸುತ್ತಾರೆ

ದೇಶದಲ್ಲಿ 2547ಕ್ಕೇರಿದ ಕರೋನಾ ಸೋಂಕಿತರ ಸಂಖ್ಯೆ

ದೇಶದಲ್ಲಿ 2547ಕ್ಕೇರಿದ ಕರೋನಾ ಸೋಂಕಿತರ ಸಂಖ್ಯೆ

ಪ್ರತಿಧ್ವನಿ ವರದಿ

ಬೆಳಗಾವಿಯಲ್ಲಿ ಮೂರುಮತ್ತು ಬಾಗಲಕೋಟೆಯಲ್ಲಿ ಒಂದು ಪ್ರಕರಣ ಸೇರಿಒಟ್ಟು ರಾಜ್ಯದಲ್ಲಿ ನಾಲ್ಕು ಪ್ರಕರಗಳು ದಾಖಲಾಗಿದ್ದು ಉಳಿದ ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳುಕಂಡು ಬಂದಿಲ್ಲ‌.     

ಮೋದಿ ಮೊಂಬತ್ತಿ ಕರೆಗೆ ಹೊತ್ತಿ ಉರಿದ ಸಾಮಾಜಿಕ ಜಾಲತಾಣ!

ಮೋದಿ ಮೊಂಬತ್ತಿ ಕರೆಗೆ ಹೊತ್ತಿ ಉರಿದ ಸಾಮಾಜಿಕ ಜಾಲತಾಣ!

ಶಶಿ ಸಂಪಳ್ಳಿ

ಮೋದಿಯವರ ವೀಡಿಯೋ ಪ್ರಸಾರವಾಗುತ್ತಲೇ ಹಲವು ಮಂದಿ ಅವರ ಅಭಿಮಾನಿಗಳೇ, ಪ್ರಧಾನಿಗಳ ಬಗ್ಗೆ ಅಪಾರ ನಂಬಿಕೆ ಇತ್ತು. ಆದರೆ, ಇಂಥ ಹೊತ್ತಲ್ಲೂ ಇವರು ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಸುರಕ್ಷಾ ಸಾಧನ ನೀಡುವ ಬಗ್ಗೆಯಾಗಲೀ, ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿರುವ ಕಾರ್ಮಿಕರ ಬಗ್ಗೆಯಾಗಲೀ ಚಕಾರವೆತ್ತದಿರುವುದು ಬೇಸರ ತರಿಸಿದೆ. ನಿಜಕ್ಕೂ ಇದು ಬಹಳ ನೋವಿನ ಸಂಗತಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕಾಸರಗೋಡು ಗಡಿ ಬಂದ್ ವಿಚಾರ; ಪಿಣರಾಯಿ ವಿರುದ್ಧ ಮುಗಿಬಿದ್ದ ಕರಾವಳಿಯ ಜನಪ್ರತಿನಿಧಿಗಳು

ಕಾಸರಗೋಡು ಗಡಿ ಬಂದ್ ವಿಚಾರ; ಪಿಣರಾಯಿ ವಿರುದ್ಧ ಮುಗಿಬಿದ್ದ ಕರಾವಳಿಯ ಜನಪ್ರತಿನಿಧಿಗಳು

ರಮೇಶ್ ಎಸ್ ಪೆರ್ಲ

ಕೇರಳ ಹೈಕೋರ್ಟ್ ಅಸೋಸಿಯೇಷನ್ ತಿರುವನಂತಪುರದಲ್ಲಿ ಕರ್ನಾಟಕ ವಿಧಿಸಿರುವ ಗಡಿ ದಿಗ್ಬಂಧನವನ್ನು ತೆಗೆದುಹಾಕುವಂತೆ ರಿಟ್ ಅರ್ಜಿ ಸಲ್ಲಿಸಿತು. ಕೇರಳ ಹೈಕೋರ್ಟ್ ಬುಧವಾರ ಈ ರಿಟ್ ಅರ್ಜಿಯ ವಿಚಾರಣೆ ನಡೆಸುತ್ತಿದ್ದಂತೆ ಮಂಗಳೂರು ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಲವು ರೋಗಿಗಳನ್ನು ಬಲತ್ಕಾರವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಕರೋನಾದಿಂದಾಗಿ ಭಾರತದ ಆರ್ಥಿಕತೆ ಮೇಲೆ ಆಗಬಹುದಾದ ನಷ್ಟ ಎಷ್ಟು ಗೊತ್ತಾ?

ಕರೋನಾದಿಂದಾಗಿ ಭಾರತದ ಆರ್ಥಿಕತೆ ಮೇಲೆ ಆಗಬಹುದಾದ ನಷ್ಟ ಎಷ್ಟು ಗೊತ್ತಾ?

ಶಿವಕುಮಾರ್‌ ಎ

ಕರೋನಾ ಎಂಬ ಮಹಾಮಾರಿ ಕಳೆದ ಜನವರಿ ತಿಂಗಳಲ್ಲೇ ಚೀನಾದಲ್ಲಿ ಮರಣ ಮೃಧಂಗ ಆರಂಭಿಸಿತ್ತು. ಆಗಲೇಅನೇಕರು ಎಚ್ಚೆತ್ತುಕೊಳ್ಳುವಂತೆ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಜರುಗಿಸುವಂತೆ ಸೂಚನೆ ನೀಡಿದ್ದರು.ಆದರೆ, ಕರೋನಾ ವೈರಸ್ ಹಾವಳಿ ಭಾರತಕ್ಕೆ ಅಷ್ಟಾಗಿ ಬರಲು ಸಾಧ್ಯವಿಲ್ಲ ಎಂದೇ ಕೇಂದ್ರ ಸರ್ಕಾರ ಭಾವಿಸಿತ್ತು.

ಹೇಳೋಕೆ ಲಕ್ಷ ಕೋಟಿ ಪ್ಯಾಕೇಜ್, ತೊಡೋಕೆ ಕನಿಷ್ಠ ಪಿಪಿಇ ಕೂಡ ಇಲ್ಲ!

ಹೇಳೋಕೆ ಲಕ್ಷ ಕೋಟಿ ಪ್ಯಾಕೇಜ್, ತೊಡೋಕೆ ಕನಿಷ್ಠ ಪಿಪಿಇ ಕೂಡ ಇಲ್ಲ!

ಶಶಿ ಸಂಪಳ್ಳಿ

ನಿತ್ಯ ಸಾವಿರಾರು ಕೋಟಿ ರೂಪಾಯಿಯ ಮಾತುಗಳು ಕೇಳಿಬರುತ್ತಿದ್ದರೂ, ವೈದ್ಯರು ಹರಿದ ರೈನ್ ಕೋಟ್ ಹಾಕಿಕೊಂಡು ಕರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಚಿತ್ರಗಳು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ರೋಗದ ವಿರುದ್ಧದ ಹೋರಾಟದ ವಿಷಯದಲ್ಲಿ ಶಂಖ-ಜಾಗಟೆಯ ‘ತಟ್ಟು ಚಪ್ಪಾಳೆ’ ಘೋಷಣೆಯ ಆಚೆಗೆ ದೇಶದ ಚುಕ್ಕಾಣಿ ಹಿಡಿದವರ ಅಸಲೀ ಬದ್ಧತೆ ಎಷ್ಟರಮಟ್ಟಿಗೆ ಇದೆ ಎಂಬುದು ಕೂಡ ಬೆತ್ತಲಾಗುತ್ತಿದೆ!

Pratidhvani
www.pratidhvani.com